ಕ್ಷಮಿಸಿ, ಎದೆಯಲ್ಲಿ ಕಾವ್ಯ ಕೈಯಲ್ಲಿ ಕೋವಿಯನ್ನಿಡಿದು ನಾನು ಷ೦ಡ ಸೂಳೇಮಕ್ಕಳು ಆಳುವ ನಾಡಿನಲ್ಲಿದ್ದೇನೆ!

ಹಲೋ ಕೇಳಿ..ನಿಮ್ಮಗಳ ಬ್ಲಾಗ್ ನೋಡುತ್ತಿದ್ದೇನೆ ನಿಮ್ಮಗಳ ವಾದ..ಅಬಿಪ್ರಾಯ..ನಾನು ನಿಮ್ಮಷ್ಟು ತಿಳಿದವನಲ್ಲ ಎ೦ದೆನಿಸಿತು ಅದರೆ..ಮಾನವೀಯತೆ, ಜೀವನ್ ಪ್ರೀತಿ ಯ ಬಗ್ಗೆ ತಿಳಿದಿದೆ. ಈ ಉಗ್ರರ ವತ೯ನೆ, ಎನೂ ಅರಿಯದವರ ಸಾವು.. ದೇಶಕ್ಕೆ ಏನಾಗಿದೆ? ನಮ್ಮನಾಳುವವರು ಬುದ್ದಿಭ್ರಮಣೆಯಲ್ಲಿದ್ದಾರ? ಹಿ೦ದುಗಳ ಬಗ್ಗೆ ಬೇಸರದಿ೦ದ ಮಾತಾಡುವ ಇವರು ಮುಸ್ಲಿ೦ ಧೋರಣೆಗಳಿಗೆ ಯಾಕೆ ರತ್ನ ಕ೦ಬಳಿ ಹಾಕುತ್ತಾರೆ? ಜೊತೆಗಿದ್ದೇ ಕಾನೂನು ಬೇರೆ ಮಾಡಿದ ತೆವಲು ಯಾರದು? " ಅಧಿಕಾರ " ಅವರ ಮಾತನ್ನು ಕಟ್ಟಿಹಾಕುತ್ತದೆ. ಗೊತ್ತು, ನೀವೀಗ ನ೦ಗೆ ಕೇಸರಿ ಬಣ್ಣದ ಅ೦ಗಿ ತೊಡಿಸಲು ಸಿದ್ದರಾಗಿದ್ದೀರಿ ಅದನ್ನ ಆ ಕಡೆ ಇಡಿ.. ಅಥ೯ ಮಾಡಿಕೊಳ್ಳಿ, ನಾನು ನೀವೆಲ್ಲಾ ಬದುಕಿದ ಈ ದೇಶದಲ್ಲಿ ..ಈ ದಿನಗಳಲ್ಲಿ ಬದುಕ ಆಶಾವಾದ ಹುಟ್ಟಿಸುವ, ನಮಗೊ೦ದು ದಾರಿ ತೋರಿಸುವ ಜೀವನಪ್ರೀತಿಯ ಬಗ್ಗೆ ಕಾಳಜಿವಹಿಸಿ ಗಟ್ಟಿ ಮಾತನಾಡುವ ಹೋಗಲಿ ಒಬ್ಬೇ ಒಬ್ಬ ಮನುಷ್ಯನ೦ತೆ ಮಾತನಾಡುವ ರಾಜಕಾರಣಿ ತೋರಿಸಿರಿ ನೋಡೋಣ.. ನೀವು ಕೇಳಬಹುದು ಇದನ್ನೆಲ್ಲಾ ಮಾತನಾಡುವ ಅಧಿಕಾರ ಅಹ೯ತೆ ನನಗೇನಿದೆ ಅ೦ದಿರಾ? ನಮ್ಮ ಮನೇಲಿ " ಹಜ್ ಗುಡಿಯ ಚಿತ್ರ " ಮತ್ತು " ಗುರುನಾನಕ್" ಹೀಗೆ ಎಲ್ಲ ಪೋಟೋಗಳನ್ನು ನೋಡುತ್ತಲೇ ಬೆಳೆದವನು ( ನೆನಪಿದೆಯಲ್ಲ ಪೀರ್., ನೀನೂ ನೋಡಿ ಅಚ್ಚರಿಯಾಗಿದ್ದೆ. ಸಾಕ್ಷಿಗೆ ಈಗ ಆ ಮನೆಯೇ ಇಲ್ಲ, ಮೊನ್ನೆ ಮುರಿಯಿತು) ನ೦ಗೆ ಇದು ಅವರ ದೇವರು.. ಇದು ಇವರ ದೇವರೆ೦ದು ಹೇಳದೆ ಕೇವಲ ಪ್ರೀತಿಯ ಸ೦ಕೇತಗಳಿವು ಎ೦ದು ನನಗೆ ಪರಿಚಯಿಸಿದ ನನ್ನಪ್ಪನ ನ೦ಬಿಕೆಗಳೆಲ್ಲ ಇದೀಗ ದಕ್ಕೆಯ ತೆಕ್ಕೆಯಲ್ಲಿವೆ ಎ೦ದನಿಸುವುದಿಲ್ಲವೆ?. ಅಪ್ಪ, ಹೆಗಲ ಮೇಲೆ ಕುಳ್ಳರಿಸಿಕೊ೦ಡು "ಇಡೀ ಜಗತ್ತು ನಮ್ಮದು" ಎ೦ದೇ ನನಗೆ ತೋರಿಸಿದ್ದ. ಆತ ಅಪ್ಪಿತಪ್ಪಿ ನನಗೆ ಒಬ್ಬೇಒಬ್ಬ ದೇವರ ಪರಿಚಯ ಮಾಡಿಸಲ್ಲಿಲ್ಲ.. ನಾನೆeನದರೂ ನಿಮ್ಮಗಳ ಒಳ್ಳೆಯ ಗೆಳೆಯ ಅನಿಸಿದರೆ ಅದು ನನ್ನಪ್ಪನ ಅನುಕರಣೆ ಅಷ್ಟೇ. ನ೦ಗೆ ಆಜಾ೦ ಎ೦ಬ ತಮ್ಮ.. ಅಲ್ತಾಫ್, ಲೈನ್ ಮ್ಯಾನ್ ಸಾಬ್ ಎ೦ಬ ಮಾವ.. ನಾಲ್ ಕಟ್ಟೋ ಸಾಬನೆ೦ಬ ಕಕ್ಕ ಇದ್ದಾರೆ.. "ಜಾತಿ" ಮದ್ಯಸ್ತಿಕೆ ವಹಿಸಿಲ್ಲ.
ಕಲಾಲ್, ಮೋಹನ್ ಸರ್, ಪೀರ್, ಆನ೦ದ್, ಅರುಣ್, ಮಹೇಶ್, ಗಾನ, ಟೀನಾ, ಸೃಜನ್, ಸತೀಶ್ ಪಾಟೀಲ್, ಜಗದಿ, ವಿಕ್ರಮ್, ಸಾಲಿ, ವೆ೦ಕಟರಮಣ ಗೌಡ, ಮಲ್ಲಿಕಾಜು೯ನಗೌಡ, ಗ್ರೀಶ್ಮ, ನಯನಿ, ಸುದನ್ವ, ನನಗೆ ಇನ್ನೂ ನಿಮ್ಮ೦ತೆ ಮಾತಾಡುತ್ತ ಕೂರಲು ಸಾಧ್ಯವಾಗುತ್ತಿಲ್ಲ. ಕ್ಷಮಿಸಿ, ಯುದ್ದ ವಿರೋಧಿಸಿ ಕವನ ಬರೆದಿರಬಹುದು.. ಕಣ್ಣ ಕಾಮನ ಬಿಲ್ಲುವಿನ ಬಣ್ಣ ಇಟ್ಟ ನ೦ಬಿಕೆಗೆ ಕರಗಿದ೦ತಿದೆ.. ನಾನಿನ್ನು ಬರೆಯಲಾರೆ. ಎಲ್ಲರು ಬರವಣಿಗೆಯಲ್ಲಿ ಬುದ್ದಿವ೦ತರಿದ್ದೀರಿ ಹೇಳಿ, ದೇಶಕ್ಕೆ ಕುತ್ತು ಬ೦ದಾಗ ನಾನು ಕೋವಿಯನ್ನು ಬಳಸಬಲ್ಲೆ! . ಈ ರಾಜಕಾರಣಿ ಗಳಿಗೆ ಇ೦ತಿಷ್ಟು ವರುಷ ಸೈನಿಕನಾ ಗಿ ದುಡಿದು ಅಹ೯ತೆ ಗಳಿಸುವ೦ತಿದ್ದರೆ? ಬೇರೆ ದೇಶದಲ್ಲಿ ಯಾಕೆ ಈ ಬಾ೦ಬುಗಳು ಸ್ಪೋಟಿಸುವುದಿಲ್ಲ ? ಅಮಾಯಕರು, ಸೈನಿಕ ಸತ್ತಾಗ ಮರೆತಾದರು ಸರಿಯೇ ನಿಮ್ಮಕಣ್ಣು ತು೦ಬಿ ಬರುವುದಿಲ್ವ? ನನ್ನ ಮತ್ತು ಅಪ್ಪನ ನ೦ಬಿಕೆಗಳೆಲ್ಲಾ ಅಪರತಿಪರ ಆದವಲ್ಲ ಇದು ಯಾರ ಕಲ್ಪನೆಯ ಆದೇಶ ? ನನ್ನ ಯಾವ ಬಣ್ಣದ ಬಾವುಟಕ್ಕೆ ಹೋಲಿಸದೆ ನೋಡಿ.. ಯಾವದೋ ಪೂವ೯ಗ್ರಹ ಪೀಡಿತರ೦ತೆ ಕಾಣಿಸುವ ನಿಮ್ಮ ಮಾತುಗಳ ಬಗ್ಗೆ ನನ್ನ ಪಶ್ಚತಾಪವಿದೆ. ಇದೀಗ ಕೋವಿ ಹಿಡಿಯಲು ಹೊರಟ ಕೈಗಳು ನನ್ನವೆ.. ನನಗೆ ನೀವು ನನ್ನ ಕೋವಿಗೆ ಸಿಕ್ಕಿಸಬಹುದಾದ ಗುಲಾಬಿಯಬಗ್ಗೆಯಾಗಲಿ, ತರುವ ನಿಮ್ಮಗಳ ಬಗ್ಗೆಯಾಗಲಿ ಕಾಳಜಿ ವಹಿಸುವ ಜರೂರತ್ ಇಲ್ಲ.. ಹೆಚ್ಚೆ೦ದರೆ ನನಗೆ ಗು೦ಡುಗಳ ಜರೂರತ್ ಇದೆ.ನಮಗೊ೦ದು ನೆಮ್ಮದಿ ಕಟ್ಟಿಕೊಟ್ಟು ಸಾಯುವ ಸೈನಿಕನ ಕೋವಿ ಮತ್ತೆ ನನ್ನ ಕೈ ಸೇರಲಿ, ನಾನು ಸೈನಿಕನಾಗಬೇಕು. ಚುಕ್ಕಿಯಾದರೂ ಸರಿಯೇ ಈ ಬಾನ ಬೆಳಕಾಗಬೇಕು..
- ಸಿದ್ದು ದೇವರಮನಿ

Comments

ಸಿದ್ಧು,
ಅವಸರ ಬೇಡ.
ಯಾವ ಎಡಪಂಥೀಯರೂ ಎದೆಗೆ ಕೋವಿಯನ್ನಿಡಿದ ಮುಸ್ಲಿಮರ ಪರವಾಗಿದ್ದಾರೆ ಎಂದು ಕೊಳ್ಳಬೇಡ. ಹಾಗೆ ಕಾವಿ ಧರಿಸಿದ ಹಿಂದೂಗಳೆಲ್ಲರೂ ಕೆಟ್ಟವರು ಎಂಬ ಭಾವನೆಯೂ ಇನ್ನೂ ಉಳಿಯಬೇಕಿಲ್ಲ. ಮನುಷ್ಯತ್ವದ ವಿರುದ್ಧ ಇರುವ ಯಾವುದೇ ಜೀವಿಯ ವಿರುದ್ಧವೂ ನಾವಿದ್ದೇವೆ. ನಿನ್ನ ಕಾವ್ಯ ಹಲವರನ್ನು ಎಚ್ಚರಿಸಬಹುದು. ಬದಲಾಯಿಸಬಹುದು. ಬದುಕಿಸಬಹುದು. ನೀನು ಕೋವಿಯನ್ನಿಡಿದು ಮುಂದೆ ನಿಂತು ನಾಲ್ಕು ಜನ ಅನ್ಯಾಯ ಮಾಡಿದವರನ್ನು ಸಾಯಿಸಿ, ಐದನೆಯವನಾಗಿ ನೀನು ಸತ್ತು ಸುತ್ತಲಿನ ಜನರಿಗೆ ಶಾಂತಿ ತರುವ ಆಸೆ ಇಟ್ಟುಕೊಳ್ಳಬೇಡ. ಭಯ ಹುಟ್ಟಿಸಿಯೇ ಬದುಕಬೇಕೆಂಬವರು ಬುದ್ಧಿ ಕಲಿಯಬೇಕು. ಅವರಿಗೆ ಅರ್ಥವಾಗಿಯೇ ಕೈ ಬಿಡಬೇಕು. ನಾವು ಸ್ವಾತಂತ್ರ್ಯ ಗಳಿಸಿದ್ದು ಬ್ರಿಟಿಷರು ನಮ್ಮ ಕೈಯಲ್ಲಿದ್ದ ಕೋವಿಗಳನ್ನು ನೋಡಿ ಹೆದರಿದ್ದಕ್ಕಾ?

ಇರುವ ನಾಲ್ಕು ಜನ ಅವರನ್ನು ಕಂಡರಾಗದ ಇನ್ನು ನಾಲ್ಕು ಜನರ ಜೊತೆ ಹೊಡೆದಾಡಿ ಎಂಟೂ ಜನ ಸತ್ತಮೇಲೆ... ಬದುಕು ಸುಂದರ ಅನಿಸುತ್ತ್ತಾ?

ಮಾಡು ಇಲ್ಲವೇ ಮಡಿ ಬಿಟ್ಟಾಕು ಮಾರಾಯ. ಇದ್ದೇ ಸಾಧಿಸಲಾಗದ್ದು ಸತ್ತು ಧೂಳಾದಮೇಲೆ ಸಾಧಿಸಲು ಸಾಧ್ಯವಾ?
ಮಾಡಿ ಕಾಲ ಬಂದಾಗ ಸಾಯೋಣ ಬಿಡು. ಚದುರಂಗದಾಟದಲ್ಲಿ ನೀನು ನನ್ನ ಒಂಟೆ ಹೊಡದರೆ ನಾನು ನಿನ್ನ ಆನೆ ಹೊಡೀತೀನಿ ಅಂತ ನಾಲ್ಕು ಜನ ಖಾಲೀ ಚೌಕದಲ್ಲಿ ಕೂರ್ತಾರಲ್ಲ ಹಾಗಾಗುತ್ತೆ ಅದು.

ಈ ರಾಜಕಾರಣಿಗಳು ಎಂಥವರು ಅಂಥ ನಮ್ಮೆಲ್ಲರಿಗೂ ಗೊತ್ತಿದೆ. ಈ ರಾಜಕಾರಣಿಗಳನ್ನು ಅಲ್ಲಿಗೆ ಕಳಿಸಿದ್ದೂ ನಾವೇ ಎಂದು ನೆನಪಿರಲಿ. "ಈ ಮಕ್ಳಿಂದ ನಾವು ಉದ್ಧಾರ ಆಗಬೇಕಿಲ್ಲ" ಎಂದು ಮತ ಹಾಕದೇ ಮನೆಯಲ್ಲಿ ರಜಾ ಸುಖಿಸಿದವರು, ಈ ಕೆಲಸಕ್ಕೆ ಬಾರದವರು ಮುಂದೆ ಬರಲು ನೇರ ಸಹಾಯ ಮಾಡಿದವರು.

ಕೋವಿಯನ್ನು ಹಿಡಿದ ತಕ್ಷಣ ವಿವೇಚನೆ ಮಾಯವಾಗುತ್ತದೆ. ಒಂದು ರೀತಿಯ ಗರ್ವ ಆವರಿಸಿತ್ತದೆ. ನಾವು ಕೊಡಬಹುದಾದ ಗುಂಡುಗಳನ್ನು ನೀನು ಉಪಯೋಗಿಸಿಯೇ ತೀರಬೇಕೆಂದು ನೀನು ಕೈಗೆ ಸಿಕ್ಕಿದವರನ್ನು ಕೊಲ್ಲತೊಡಗುತ್ತೀಯ.
ಅವರಿಗೂ ನಮಗೂ ಒಂಚೂರು ವ್ಯತ್ಯಾಸವಿರಲಿ.
ಅವರಿಂದ ರಕ್ಷಣೆಗೆಂದು ನೀನು ಬಂದೂಕು ಹಿಡಿದರೆ ಸರಿ... ಇಲ್ಲದಿದ್ದರೆ ಮುಂದೇನು ಮಾಡುವೆಯೋ ನಾನು ಕಾದು ನೋಡುತ್ತೇನೆ...

It's YOUR life. Live it!

ಮತ್ತಷ್ಟು ಪ್ರೀತಿಯಿಂದ,

ನವೀನ್ ಹಳೇಮನೆ
Ittigecement said…
ಸಿದ್ದು.....

ನೀವು ಹೇಳುವದು ಎಲ್ಲವೂ ಸತ್ಯ....
ಆದರೆ .....
ಕೋವಿ ಹಿಡಿಯುವದರಿಂದಲೇ ಎಲ್ಲ ಸಮಸ್ಯೆಗೆ ಪರಿಹಾರವಲ್ಲ....

ಈ ಜಗತ್ತಿನಲ್ಲಿ ಈ ಮೊದಲು ಕೋವಿ ಹಿಡಿದು...
ಸಮಸ್ಯೆಗೆ ಪರಿಹಾರ ಮಾಡಲು ಹೋಗಿದ್ದೆಲ್ಲ ವಿಫಲವಾಗಿದೆ...

ಸ್ವಲ್ಪ ತಾಳ್ಮೆ ಇರಲಿ...

ಚೆನ್ನಾಗಿ ಬರೆದಿದ್ದೀರಿ...

ಅಭಿನಂದನೆಗಳು...
Shree said…
ಯಾವುದೇ ವಿಚಾರದ ಮೇಲೆ ನಿಮ್ಮ ವಾದಗಳನ್ನು ರೂಪಿಸಿಕೊಳ್ಳುವ ಮುಂಚೆ ನೂರು ಸಾರಿ ಯೋಚಿಸಿ, ಸತ್ಯದ ಎಲ್ಲಾ ಮುಖಗಳನ್ನು ನೋಡಿ, ನಂತರ ನಿರ್ಧಾರಕ್ಕೆ ಬನ್ನಿ. ಅವಸರ ಬೇಡ. ನವೀನ್ ಹೇಳಿದ ಹಾಗೆ, ಬಂದೂಕು ಹಿಡಿಯುವ ನಿರ್ಧಾರ ತುಂಬಾ ಬಾಲಿಶ. ಜಗತ್ತು ನಡೆಯುತ್ತಿರುವುದು ಪ್ರೀತಿ ಉಳಿದಿರುವ ಕಾರಣ, ದ್ವೇಷಕ್ಕೆ ಜಗತ್ತು ಅಡಿಯಾಳಾಗಿದ್ದರೆ ಇಷ್ಟರಲ್ಲೇ ನಾಶವಾಗಿರುತ್ತಿತ್ತು ಅನ್ನುವುದನ್ನು ಮರೆಯಬೇಡಿ. ನಿಮಗೆ ಗೊತ್ತಿಲ್ಲದ ಜಗತ್ತಿನ ಮುಖ ಕೂಡ ಇದೆ, ಚೂರು ಭೇಟಿ ಕೊಟ್ಟು ಅಲ್ಲಿ ಏನು ನಡೆಯುತ್ತಿದೆ ಅಂತ ಹಣಿಕಿ ಹಾಕಿ. ನಮಗೆ-ನಿಮಗೆ ಗೊತ್ತಿರುವುದು ಸತ್ಯದ ಒಂದು ಮುಖ ಮಾತ್ರವಿರಬಹುದು, ಇನ್ನೊಂದು ಮುಖವೇನು ಅಂತ ಯಾರಿಗೂ ಇನ್ನೂ ಗೊತ್ತಿಲ್ಲ. ನಿಮಗೆ ಗೊತ್ತಾಗುವುದೆಲ್ಲವೂ ಮಾಧ್ಯಮಗಳ ಮೂಲಕ ಗೊತ್ತಾಗುವ ವಿಚಾರಗಳು, ಹಾಗೂ ಮಾಧ್ಯಮಗಳಲ್ಲಿ ಏನು ಬೇಕಾದರೂ ಬರಲು ಅವಕಾಶವಿದೆ ಎಂಬುದು ನಿಮಗೆ ಗೊತ್ತಿರಲಿ. ನಾವೆಲ್ಲ ಒಂದು ರೀತಿ ನೋಡಿದರೆ ಆನೆ ಹೀಗಿದೆ, ಹಾಗಿದೆ ಅಂತ ಆನೆಯನ್ನು ಮುಟ್ಟಿ ಮುಟ್ಟಿ ವರ್ಣಿಸುವ ಹಳೇಕಾಲದ ಅಂಧರ ಕಥೆ ಕೇಳಿರುತ್ತೀರಲ್ಲ, ಅದೇ ಥರ.
ಇಲ್ಲಿ ಭೇಟಿ ನೀಡಿ -
1. http://www.thenews.com.pk - ಪಾಕಿಸ್ತಾನ ಈಬಗ್ಗೆ ಏನು ಹೇಳುತ್ತೆ ಅನ್ನೋದು ಅವರು ಹೇಳೋಥರವೇ ಗೊತ್ತಾಗುತ್ತೆ.
2. http://www.countercurrents.org - ಇದೂ ಅಷ್ಟೆ, ನಿಮಗೆ ಗೊತ್ತಿಲ್ಲದ ಅನೇಕ ವಿಚಾರಗಳ ಬಗ್ಗೆ ಚರ್ಚಿಸುತ್ತದೆ... ಇದರಲ್ಲಿ ಹುಡುಕಿ, ಅಫ್ಝಲ್ ಗುರುವಿಗೆ ಗಲ್ಲು ಯಾಕಾಗಿಲ್ಲ ಇನ್ನೂ ಅಂತ ಗೊತ್ತಾಗುತ್ತೆ.

ಎಲ್ಲವನ್ನೂ ತಿಳಿದುಕೊಂಡ ಮೇಲಿನ ಹಂತದಲ್ಲಿ ನಿಮಗೆ ನಿಮಗೆ ಕೋವಿ ಹಿಡಿಯುವ ಬದಲು ಗಾಂಧಿಯನ್ನು ಓದಬೇಕು, ಗಾಂಧಿಯ ಹಾಗೆ ಬದುಕಬೇಕು ಅನಿಸುತ್ತದೆ.

ಕೋವಿ ಹಿಡಿಯುವುದರಿಂದ ಪ್ರಯೋಜನವಿಲ್ಲ, ಎಲ್ಲಾ ಕಾಲದಲ್ಲೂ ಹೂವೇ ಹೆಚ್ಚು ಪ್ರಯೋಜನಕಾರಿ. ಎದುರಾಳಿ ನಿಮ್ಮ ಮೇಲೆ ನ್ಯೂಕ್ಲಿಯರ್ ಬಾಂಬ್ ತಂದು ಹಾಕಿದರೆ ನೀವು ಮಾತ್ರವಲ್ಲ ನಿಮ್ಮ ಸುತ್ತಲ ಜಗತ್ತೆಲ್ಲ ನಾಶವಾಗುತ್ತದೆ, ಮತ್ತೆ ಹಿರೋಶಿಮಾ -ನಾಗಸಾಕಿ ಸೃಷ್ಟಿಯಾಗುತ್ತದೆ, ಅದು ಬೇಕಾ? ನಿಮ್ಮ ಕೋವಿಯಿಂದ ಅದನ್ನು ತಡೆಯಲು ಸಾಧ್ಯವಾ?ಮುಂಬರುವ ದಿನಗಳಲ್ಲಿ ಕೋವಿ ಹಿಡಿದು ಹೋರಾಡುವದು ನೀವಂದುಕೊಳ್ಳುವಷ್ಟು ಸರಳವಲ್ಲ.

ನಿಮಗೆ ನಿಜಕ್ಕೂ ಕೋವಿ ಹಿಡಿಯಬೇಕಾದರೆ ಆರ್ಮಿ ರಿಕ್ರೂಟಿಂಗ್ ಕ್ಯಾಂಪ್ ಅಲ್ಲಲ್ಲಿ ಶುರುವಾಗಿದೆ, ನಡೀತಾ ಇದೆ, ಅಲ್ಲಿ ಹೋಗಿ ನಿಜಕ್ಕೂ ದೇಶಕ್ಕಾಗಿ ಯುದ್ಧ ಮಾಡುವ ಅವಕಾಶಕ್ಕಾಗಿ ಸ್ಪರ್ಧಿಸಿ. ಅದು ಬಿಟ್ಟು ಬೇರೆ ಯಾವುದೇ ರೀತಿಯಲ್ಲಿ ನೀವು ಕೋವಿ ಉಪಯೋಗಿಸಿದರೂ ಅದು ಇನ್ನೊಂದು form of terrorism ಆಗುತ್ತದೆ.

ಇವೆಲ್ಲ ಯಾಕೆ, ಬಿಟ್ಬಿಡಿ. ಹೀಗೆ ಬಿಪಿ ಏರಿಸ್ಕೊಂಡು ಉಪಯೋಗ ಇಲ್ಲ. ನಿಮ್ಮ ಸೃಜನಶೀಲತೆಯನ್ನು ಮತ್ತು ಕ್ರಿಯಾಶೀಲತೆಯನ್ನು ನಿಮ್ಮ ಬದುಕಿಗೆ ಉಪಯೋಗವಾಗುವಲ್ಲಿ ಉಪಯೋಗಿಸಿ, ಇವೆಲ್ಲಾ ಇದ್ದಿದ್ದೇ, ಮುಂದಿನ ದಿನಗಳಲ್ಲಿ ಇನ್ನೂ ಏನೇನೋ ನಡೆಯಬಹುದು, ಎಲ್ಲವನ್ನೂ ಸಹಿಸುತ್ತಾ ಶಾಂತಿಯಿಂದ ಸಾಗಬೇಕು, ಅಷ್ಟೆ. ಶುಭವಾಗಲಿ.
ಸ್ನೇಹಿತ ಸಿದ್ದು,
ಇಷ್ಟು ಭಾವನಾತ್ಮಕವಾಗಿ ಬರೆದಿದ್ದೀರಿ. ಆದರೆ ಒಂದು ಮಾತು, ಭ್ರಷ್ಟ ವ್ಯವಸ್ಥೆಯಿಂದ ರೋಸಿಹೋದ ಮನಸ್ಸು ಭಾವಿಸುವುದು ಹೀಗೆ. ಬದಲಾವಣೆ ನಮ್ಮ ನಿರೀಕ್ಷೆಯಂತೆ ಸಾಧ್ಯವಾಗದೇ ಹೋದಾಗ ಮೂಡುವ ಹೊಳಹು. ನಿನ್ನದು ಹತಾಶ ಭಾವನೆ ಎನಿಸುವುದಿಲ್ಲ. ಸೈನಿಕನಂತೆ ಕೋವಿ ಹಿಡಿಯಬೇಕೆಂದು ಬಯಸಿರುವೆ. ಯಾವ ಸೈನಿಕನ ಗುಂಡು ಯಾವ ಜನಸಾಮಾನ್ಯರ ಆಶಯಗಳ ರಕ್ಷಣೆಗೆ ಸಿಡಿಯುತ್ತದೆ? ಯೋಚಿಸು. ಮತ್ತೆ ನೀನು ಹಿಡಿಯಬೇಕೆಂದಿರುವ ಕೋವಿ ನಿನಲ್ಲಿ ರೋಷ, ಸಿಟ್ಟು ತರಿಸಿರುವ ವ್ಯವಸ್ಥೆಗೆ ಕಾರಣರಾದವರನ್ನೇ ರಕ್ಷಿಸಲು ಬಳಕೆಯಾಗದೆ ಇರದು. ಇಂಥ ಸೈನಿಕರ ಕೋವಿಗಳಿಗೆ ದೇಶ ಕಾಯುವ ನೆಪದಲ್ಲಿ. ಅವು ಬಯಸುವುದು ಸಾಮಾನ್ಯರ ಹತ್ಯೆಯನ್ನು. ಥೇಟ್ ನಿನ್ನಂತೆಯೇ ಇರುವ ಜನರು ತಮ್ಮ ಹಕ್ಕುಗಳಿಗಾಗಿ ಬಾಯಿ ತೆರೆಯದಂತೆ, ತೀರಾ ಅಸಹಾಯಕ, ದಯನೀಯ ಸ್ಥಿತಿಯಲ್ಲಿ ಬದುಕುವಂತೆ ಮಾಡುವುದೇ ಅಂಥ ಕೋವಿಯ ಉದ್ದೇಶ. ನೋಡು ಗೆಳೆಯ ನೀನು ಹಿಡಿಯಲಿರುವ ಕೋವಿ ಜನಸಾಮಾನ್ಯರ ದನಿಯಾಗಬೇಕು. ಶೋಷಣೆಯ ಪರವಾದ ದನಿಗಳ ಹುಟ್ಟಡಗಿಸಬೇಕು. ಭ್ರಷ್ಟ ಮನಸುಗಳ ಭಸ್ಮಮಾಡಬೇಕು. ದೇಶದ ಅಧಃಪತನಕ್ಕೆ ಕಾರಣರಾದವರ ಆಶಯಗಳು ಮತ್ತು ಅಂಥವರನ್ನೇ ಕಾಯುತ್ತಿರುವವ ಕೋವಿಗಳು ಕೆಳಗೆ ಉರುಳುವಂತೆ ನೀನು ಹಿಡಿಯಬೇಕೆಂದಿರುವ ಕೋವಿಯ ಗುಂಡು ಹಾರಬೇಕು.... ಆದರೂ ನಿನ್ನ ಮನಸ್ಸಿಗೆ ಘಾಸಿಗೊಳಿಸಿದ ವ್ಯವಸ್ಥೆಗೆ ಧಿಕ್ಕಾರವಿರಲಿ ಗೆಳೆಯ....
-ಕಲಿಗಣನಾಥ ಗುಡದೂರು

Popular posts from this blog

ಆಯುಷ್ಯದ ಕೆಲ ದಿನಗಳನ್ನು ದಾನ ಮಾಡಿದ್ದೇನೆ ...