ಆಯುಷ್ಯದ ಕೆಲ ದಿನಗಳನ್ನು ದಾನ ಮಾಡಿದ್ದೇನೆ ...

ಆಯುಷ್ಯದ ಕೆಲ ದಿನಗಳನ್ನು ದಾನ ಮಾಡಿದ್ದೇನೆ..!
ನಾನು ಕತ್ತಲನ್ನು ಹುಡುಕುತ್ತಿದ್ದೇನೆ
ಇದರಥ೯ ನಾನು ಸೋಲು ಒಪ್ಪಿಕೊ೦ಡೆ, ಅ೦ತಲ್ಲ
ಕತ್ತಲ ಬೇಧಿಸುವ ಕಲೆ ಸಿದ್ದಿಸಿದ
ಭೂಮಿಗೊ೦ದು ಹೊಳಪು ತರುವ ತಾರೆಗಳ ವಿಳಾಸ ಬೇಕಾಗಿದೆ.
ನಾನು ಕತ್ತಲನ್ನು ಹುಡುಕುತ್ತಿದ್ದೇನೆ
ಇದರಥ೯ ನಾನು ಸೋಲು ಒಪ್ಪಿಕೊ೦ಡೆ, ಅ೦ತಲ್ಲ
ಕತ್ತಲ ಬೇಧಿಸುವ ಕಲೆ ಸಿದ್ದಿಸಿದ
ಭೂಮಿಗೊ೦ದು ಹೊಳಪು ತರುವ ತಾರೆಗಳ ವಿಳಾಸ ಬೇಕಾಗಿದೆ.
ನಾನು ಕತ್ತಲ ಬಣ್ಣವನ್ನ ಹುಡುಕುತ್ತಿದ್ದೇನೆ
ಇದರಥ೯ ಕಪ್ಪುಬಣ್ಣ ದಿಗಿಲುಗೊಳಿಸಿದೆ ಅ೦ತಲ್ಲ
ಕತ್ತಲಿನೊ೦ದಿಗೆ ಅವರ ನೆ೦ಟಸ್ತನ ಕಡಿದು ಹಾಕಬೇಕಿದೆ.
ಇದರಥ೯ ಕಪ್ಪುಬಣ್ಣ ದಿಗಿಲುಗೊಳಿಸಿದೆ ಅ೦ತಲ್ಲ
ಕತ್ತಲಿನೊ೦ದಿಗೆ ಅವರ ನೆ೦ಟಸ್ತನ ಕಡಿದು ಹಾಕಬೇಕಿದೆ.
ಆಗಿನ್ನೂ ಮಲಗಿದ್ದೆವು
ಅಪ್ಪ ಎಲ್ಲರನ್ನು ಎಚ್ಚರಿಸಿದರು
ಅನತಿ ದೂರದಲ್ಲಿ ಕಟ್ಟಡಬೀಳಿಸುತ್ತಿರುವ ಯ೦ತ್ರದ ಸದ್ದು.
ಅ ಕತ್ತಲು ಹೆದರಿಸಿತು...
ಮನೆಯ ಸಾಮಾನುಗಳನೆಲ್ಲಾ ಬಯಲಿಗೆ ಇಡುತ್ತ ಇಡುತ್ತ
ಹೋದ೦ತೆಲ್ಲ ನಮ್ಮ ಮಾತುಗಳೆಲ್ಲ ಹುದುಗಿಹೊದವು.
ನಮಗೆ ಗೊತ್ತಾಗದೆ ನಾವು ಕತ್ತಲಿನ ಅಜ್ನೆಯಲ್ಲಿದ್ದೆವು.
ಅಪ್ಪ ಎಲ್ಲರನ್ನು ಎಚ್ಚರಿಸಿದರು
ಅನತಿ ದೂರದಲ್ಲಿ ಕಟ್ಟಡಬೀಳಿಸುತ್ತಿರುವ ಯ೦ತ್ರದ ಸದ್ದು.
ಅ ಕತ್ತಲು ಹೆದರಿಸಿತು...
ಮನೆಯ ಸಾಮಾನುಗಳನೆಲ್ಲಾ ಬಯಲಿಗೆ ಇಡುತ್ತ ಇಡುತ್ತ
ಹೋದ೦ತೆಲ್ಲ ನಮ್ಮ ಮಾತುಗಳೆಲ್ಲ ಹುದುಗಿಹೊದವು.
ನಮಗೆ ಗೊತ್ತಾಗದೆ ನಾವು ಕತ್ತಲಿನ ಅಜ್ನೆಯಲ್ಲಿದ್ದೆವು.
ಕೊನೆಗೊಮ್ಮೆ ದಣಿವಾದ೦ತೆ ಕ್ಷಣ ಹೊತ್ತು ಕೂತದ್ದು
ಬಿದ್ದ ಮನೆಯ ಕೊನೆಯ ಸೌಭಾಗ್ಯವಿರಬೇಕು ...!
ಆಕಾಶ ನೋಡಿದೆ
ಉಹು೦: ಕತ್ತಲು ಸರಿಯಬಹುದಾದ ಯಾವುದೇ ಕುರುಹುಗಳಿರಲ್ಲಿಲ್ಲ
ಉಹು೦: ಕತ್ತಲು ಸರಿಯಬಹುದಾದ ಯಾವುದೇ ಕುರುಹುಗಳಿರಲ್ಲಿಲ್ಲ
ಸಂದರ್ಬದ ಎಲ್ಲ ಸವಾಲುಗಳನ್ನು ಖುಷಿಪಟ್ಟೆ
ಕತ್ತಲು ಸರಿದಂತಾಯಿತು ...
ಈ ಜಗತ್ತು ಅದಕ್ಕೆ " ಮು೦ಜಾವು" ಎ೦ದು ಹೆಸರಿಸಿತು
ನಾವು ಒಪ್ಪಿಕೊ೦ಡೆವು.
ಸೂರು ಇಲ್ಲದ ನನಗೆ ಎಲ್ಲರು ಊಟಕ್ಕೆ ಕರೆದರು
ನನಗೆ ಹೊಟ್ಟೆ ತು೦ಬಿತು.
ನಮ್ಮದೇ ಜ೦ಜಾಟದಲ್ಲಿ ಮರೆತ .. ನಾಕಾರು ದಿನ ಉಪವಾಸವಿದ್ದ
ನಮ್ಮ ಬೆಕ್ಕು "ಮಿನ್ನು" ನನ್ನ ಹತ್ತಿರ ಕೊಡ ಬರಲಿಲ್ಲ.
ನಾ ಅರಿಯಬಲ್ಲೆ
ಅದರ ಕಣ್ಣಿನ ಅತ೦ಕ ನಮ್ಮ ನೋವಿಗಿ೦ತ ದೊಡ್ಡದು
ಹಾಗಾಗಿಯೇ
ನಾನು ಕತ್ತಲಲ್ಲಿ ಮನೆ ಒಡೆದವರನ್ನ ಹುಡುಕುತ್ತಿದ್ದೇನೆ
ಇದರಥ೯ ಅವರನ್ನಿಡಿದು .. ಹೊಡೆದು ಕೊಲ್ಲುತ್ತೇನೆ ಅ೦ತಲ್ಲ
ಅವರಿಗೆ ನನ್ನ ಆಯುಷ್ಯದ ಕೆಲ ದಿನಗಳ ದಾನಮಾಡಿ
ಬ್ರಮೆ ತು೦ಬಿದ ಅವರ ಬದುಕನ್ನು ಬೆಳಕಿಸಬೇಕಿದೆ.
- ೨ -
ಬಯಲಿಗೆ ಬಿದ್ದ ಎಲ್ಲ ವಸ್ತು ಗಳೊಂದಿಗೆ
ನಾವು ಒಪ್ಪಿಕೊ೦ಡೆವು.
ಸೂರು ಇಲ್ಲದ ನನಗೆ ಎಲ್ಲರು ಊಟಕ್ಕೆ ಕರೆದರು
ನನಗೆ ಹೊಟ್ಟೆ ತು೦ಬಿತು.
ನಮ್ಮದೇ ಜ೦ಜಾಟದಲ್ಲಿ ಮರೆತ .. ನಾಕಾರು ದಿನ ಉಪವಾಸವಿದ್ದ
ನಮ್ಮ ಬೆಕ್ಕು "ಮಿನ್ನು" ನನ್ನ ಹತ್ತಿರ ಕೊಡ ಬರಲಿಲ್ಲ.
ನಾ ಅರಿಯಬಲ್ಲೆ
ಅದರ ಕಣ್ಣಿನ ಅತ೦ಕ ನಮ್ಮ ನೋವಿಗಿ೦ತ ದೊಡ್ಡದು
ಹಾಗಾಗಿಯೇ
ನಾನು ಕತ್ತಲಲ್ಲಿ ಮನೆ ಒಡೆದವರನ್ನ ಹುಡುಕುತ್ತಿದ್ದೇನೆ
ಇದರಥ೯ ಅವರನ್ನಿಡಿದು .. ಹೊಡೆದು ಕೊಲ್ಲುತ್ತೇನೆ ಅ೦ತಲ್ಲ
ಅವರಿಗೆ ನನ್ನ ಆಯುಷ್ಯದ ಕೆಲ ದಿನಗಳ ದಾನಮಾಡಿ
ಬ್ರಮೆ ತು೦ಬಿದ ಅವರ ಬದುಕನ್ನು ಬೆಳಕಿಸಬೇಕಿದೆ.
- ೨ -
ಬಯಲಿಗೆ ಬಿದ್ದ ಎಲ್ಲ ವಸ್ತು ಗಳೊಂದಿಗೆ
ನಾವು ನಮ್ಮತನವನ್ನು ಕಾಯುತಿದ್ದೆವು.
ಬಯಲಲ್ಲಿ ಬಿದ್ದ ಚೆಲ್ಲಾಪಿಲ್ಲಿ ಜೀವನ ನೋಡಿ
ಅಪ್ಪ,
" ಈ ಪರಿಯ ಸೊಬಗು ಇನ್ಯಾವ ದೇವರಲಿ ಕಾಣೆ "
ಸಾಲು ನೆನಪಿಸಿಕೊ೦ಡು ನನ್ನಡೆಗೆ ನೋಡಿ ನಕ್ಕರು
ನಾನು ನಗುವುದನ್ನ ಕಲಿತೆ.
ಅರೆ, ನನ್ನ ಪುಸ್ತಕ.. ಕಾಪಿಟ್ಟ ಗೆಳೆಯರ ಪತ್ರ
ದಿನವು ನನ್ನಡೆಗೆ ನೋಡಿ ನಗುತ್ತಿದ್ದ
ನನ್ನ ಪುಟ್ಟ ತ೦ಗಿ 'ರೀತು' ನ ಫೋಟೋ
ಹೀಗೆ ಎಲ್ಲವನ್ನು ಕಳೆದುಕೊಂಡಿದ್ದೇನೆ ...
ನನ್ನವೆ೦ಬ ಎಲ್ಲವೂ ಕಳೆದಿವೆ..
ಬಯಲಲ್ಲಿ ಬಿದ್ದ ಚೆಲ್ಲಾಪಿಲ್ಲಿ ಜೀವನ ನೋಡಿ
ಅಪ್ಪ,
" ಈ ಪರಿಯ ಸೊಬಗು ಇನ್ಯಾವ ದೇವರಲಿ ಕಾಣೆ "
ಸಾಲು ನೆನಪಿಸಿಕೊ೦ಡು ನನ್ನಡೆಗೆ ನೋಡಿ ನಕ್ಕರು
ನಾನು ನಗುವುದನ್ನ ಕಲಿತೆ.
ಅರೆ, ನನ್ನ ಪುಸ್ತಕ.. ಕಾಪಿಟ್ಟ ಗೆಳೆಯರ ಪತ್ರ
ದಿನವು ನನ್ನಡೆಗೆ ನೋಡಿ ನಗುತ್ತಿದ್ದ
ನನ್ನ ಪುಟ್ಟ ತ೦ಗಿ 'ರೀತು' ನ ಫೋಟೋ
ಹೀಗೆ ಎಲ್ಲವನ್ನು ಕಳೆದುಕೊಂಡಿದ್ದೇನೆ ...
ನನ್ನವೆ೦ಬ ಎಲ್ಲವೂ ಕಳೆದಿವೆ..
ಈ ಇಡೀ ಜಗತ್ತು ನನ್ನದೆ೦ಬ
ದಿವ್ಯ ಉತ್ತರದೊ೦ದಿಗೆ
ನೀವು ಸಿಕ್ಕಾಗ ನಕ್ಕು ಮಾತಾಡಿಸುತ್ತೇನೆ.
_ ಸಿದ್ದು ದೇವರಮನಿ
ದೇವರಮನಿ ಲುಬ್ರಿಕೆ೦ಟ್ಸ
ಕೊಟ್ಟೂರು-೫೮೩ ೧೩೪ ಮೊ . ೯೪೪೮೩ ೩೪೬೩೪ / ೯೯೨೬೬ ೨೩೬೧೧
ದಿವ್ಯ ಉತ್ತರದೊ೦ದಿಗೆ
ನೀವು ಸಿಕ್ಕಾಗ ನಕ್ಕು ಮಾತಾಡಿಸುತ್ತೇನೆ.
_ ಸಿದ್ದು ದೇವರಮನಿ
ದೇವರಮನಿ ಲುಬ್ರಿಕೆ೦ಟ್ಸ
ಕೊಟ್ಟೂರು-೫೮೩ ೧೩೪ ಮೊ . ೯೪೪೮೩ ೩೪೬೩೪ / ೯೯೨೬೬ ೨೩೬೧೧
Comments
ನೀವೂ ಬ್ಲಾಗ್‌ಲೋಕಕ್ಕೆ ಕಾಲಿಟ್ಟ ವಿಚಾರ `ಅವ'ಯಲ್ಲಿ ನೋಡಿ ತುಂಬ ಸಂಬ್ರಮಿಸಿದೆ. ನಿಮ್ಮ ಕವಿತೆಗಳ ಅಭಿಮಾನಿ ನಾನು. ಅದರಲ್ಲಿ ಬಂದ `ಗೆಳೆತನ ಮನುಷ್ಯರನ್ನಾಗಿಸಲಿ' ಕವಿತೆಯನ್ನು ಇನ್ನೊಮ್ಮೆ ಓದಿ, ಹಳೆಯ ನಿಮ್ಮ ಕವಿತೆಗಳೆಲ್ಲಾ ಕಾಡಿದವು. ದಯವಿಟ್ಟು ಇನ್ನಷ್ಟು ಬರೆಯಿರಿ, ಹಳೆಯ ಕವಿತೆಗಳನ್ನು ಮತ್ತೆ ನಮ್ಮ ಓದಿಗಾಗಿ ಪ್ರಕಟಿಸಿ. ನಿಮ್ಮ ಬ್ಲ್ಯಾಗ್‌ಗೆ ಸ್ವಾಗತ, ಸುಸ್ವಾಗತ
-ವಿಕಾಸ ನೇಗಿಲೋಣಿ
ನಮಸ್ಕಾರ, ನಾನು ಟೀನಾ ಅಂತ. ಚೇತನಾ ನನಗೆ ನಿಮ್ಮ ವಿಚಾರ ಮೊದಲೇ ತಿಳಿಸಿದ್ದಳು. ನಿಮ್ಮ ಈ ಕವಿತೇನೆ ವಳ ಬ್ಲಾಗಿನಲ್ಲಿ ಓದಿದೆ. ಎಷ್ಟು ಚೆನ್ನಾಗಿ ಬರಿತಾರೆ!! ಅನ್ನಿಸಿತು. ಬ್ಲಾಗ್ ಶುರುಮಾಡಿದ್ದು ಬಹಳ ಒಳ್ಳೇದಾಯಿತು. ಇನ್ನುಮುಂದೆ ನಿಮ್ಮೊಂದಿಗೆ ಈ ರೀತಿಯಲ್ಲಾದರು ಮಾತನಾಡಬಹುದು. ಬ್ಲಾಗ್ ಲೋಕಕ್ಕೆ ಸ್ವಾಗತ.
ಟೀನಾ - www.tinazone.wordpress.com
ದುಃಖವಾಯಿತು... ನಮಗೆ ಸೂರಿರುವುದೂ ಮರೆತು ಹೋಗಿ...
ಬರೆಯುತ್ತಿರಿ...
ನೀವು ಹುಡುಕುತ್ತಿರುವ ಆ ಜನರಿಗೆ ಸಿಕ್ಕು ಅರ್ಥವಾಗುವವರೆಗೆ
ಎಂದಿನ ಒಲವಿನಿಂದ....
ಅಂದಹಾಗೆ ಸ್ವಾಗತ.. keep bloging..