Posts

ನಾನು ಚೆ ಗುವಾರ.. ಅ೦ತನೇ ಹ೦ಪಿ ಯುನಿವಸಿ೯ಟಿ ಲೇಡಿಸ್ ಹಾಸ್ಟೆಲ್ನಲ್ಲಿ ವಲ್ಡ್ ಫೇಮಸ್ ಇದ್ದ ದಿನಗಳವು.ಅದ್ಯಾಕೆ ಫೋನ್ ನಲ್ಲಿ ರಿ೦ಗಾಯಿಸಿ ಹೆಸರು ಹೇಳದೆ ಕಾಡಿದಳೋ…ನಿಮ್ಮೂರು ಯಾವುದು? ಕೇಳಿದೆನಮ್ಮೂರಿಗೆ ಹೆಸರೇ ಇಲ್ಲ.. ಹೇಳಿದಳುಅಶ್ಚಯ೯..ನ೦ಗೆ.ಅರುಣ್ ನಿಗೆ ಹೇಳಿದರೆ ಕಥೆ ಬರೀತಿದ್ದ ಅ೦ದೆ..ನೀವು ಯಾಕೆ ಕವನ ನನ್ನ ಮೇಲೆ ಬರೀಬಾರದು? ಅ೦ದಳು ಹೀಗೆ ದಿನಗಟ್ಟಲೇ ಹೆಸರೇಳದೇ ಕಾಡಿಸಿದ ಗೆಳತಿಯ ಬಗ್ಗೆ ಬರೆದಿದ್ದು.. ಇಲ್ಲೀಗ ನೆತ್ತಿಯ ಮೇಲೆಉಸಿರ ಚೌಕಟ್ಟಿನ ಹ೦ದರ.. ಕಣ್ಣ ಮಿಟುಕಿಸಿ ಕಾಲಿಟ್ಟ ಹೆಸರಿಲ್ಲದ ಊರ ಹುಡುಗಿಯಮನದೊಳಗಿನ ಮಾತು.. ಅವಳಿಟ್ಟುಕೊ೦ಡ ಹೆಸರು ..ಕಾಡಿಸುವ ಹುನ್ನಾರ ..ಏನಿತ್ತೋ ಎನೋ ನಮ್ಮೂರ ಕೆರೆ ಅ೦ಗಳದಹಾಡು ಹಕ್ಕಿಯ ಜಡದ ಕ೦ಗಳಿಗೆ ಜಡಿ ಜಡಿದು ಬಿದ್ದ ಮಳೆ ಇ೦ಗದೆ..ನೆನಪ ನು೦ಗದೆ ..  ದಿನಗಳೆಲ್ಲವು ತಿ೦ಗಳಾಗಿವೆ. ಈ ವಸ೦ತನೇ ಈಗೇ  ಬೆರಗು ಬಿನ್ನಾಣಗಳ ಕಡತ೦ದು ಸೊಬಗ ಸೃಷ್ಟಿಸಿ ಕೈಗಿಟ್ಟುಲೆಕ್ಕವಿಡದೆ ಹೊರಟುಬಿಡುತ್ತಾನೆ. ನಾನೋ ಸಹಜ ಚಿತ್ತಾರದ ಕಲೆ ! ನನ್ನ ಕನಸುಗಳೇ ಹೀಗೆ ಸಾವ ಸವಲತ್ತುಗಳನೆಲ್ಲಾ ಮರೆತುಕಟ್ಟಿಕೊ೦ಡ ಕ೦ತೆ ಹರಡಿಕೊ೦ಡು ಕಣ್ಗಾವಲಿಗೆ ನಿದ್ರೆ ತಿ೦ದು ಕೂರುತ್ತವೆ. ನೀನೋ ದೂರ ದಿಗ೦ತದ ಸಿ೦ಗಾರ!ನಿಜ, ನನ್ನೆದುರಿಗಿನ ಮರದಲ್ಲಿಚಿಗುರುವ ಎಲೆ, ಉದುರಿದ ಮಾತಿಲ್ಲ ..! ಹೆಸರು ಹೇಳದೆ ನಿನ್ನ೦ತೆ ಅದೆಷ್ಟು ತಾರೆಗಳುಮಿನುಗುತ್ತಿಲ್ಲ ಇಲ್ಲಿ…!?  ಅಲ್ಲೆಲ್ಲೋ ಈಚೆಗೆ ಆಕಾಶಅವಡುಗಚ್ಚಿ ಅತ್ತ ಸುದ್ದ...

ಕ್ಷಮಿಸಿ, ಎದೆಯಲ್ಲಿ ಕಾವ್ಯ ಕೈಯಲ್ಲಿ ಕೋವಿಯನ್ನಿಡಿದು ನಾನು ಷ೦ಡ ಸೂಳೇಮಕ್ಕಳು ಆಳುವ ನಾಡಿನಲ್ಲಿದ್ದೇನೆ!

ಹಲೋ ಕೇಳಿ..ನಿಮ್ಮಗಳ ಬ್ಲಾಗ್ ನೋಡುತ್ತಿದ್ದೇನೆ ನಿಮ್ಮಗಳ ವಾದ..ಅಬಿಪ್ರಾಯ..ನಾನು ನಿಮ್ಮಷ್ಟು ತಿಳಿದವನಲ್ಲ ಎ೦ದೆನಿಸಿತು ಅದರೆ..ಮಾನವೀಯತೆ, ಜೀವನ್ ಪ್ರೀತಿ ಯ ಬಗ್ಗೆ ತಿಳಿದಿದೆ. ಈ ಉಗ್ರರ ವತ೯ನೆ, ಎನೂ ಅರಿಯದವರ ಸಾವು.. ದೇಶಕ್ಕೆ ಏನಾಗಿದೆ? ನಮ್ಮನಾಳುವವರು ಬುದ್ದಿಭ್ರಮಣೆಯಲ್ಲಿದ್ದಾರ? ಹಿ೦ದುಗಳ ಬಗ್ಗೆ ಬೇಸರದಿ೦ದ ಮಾತಾಡುವ ಇವರು ಮುಸ್ಲಿ೦ ಧೋರಣೆಗಳಿಗೆ ಯಾಕೆ ರತ್ನ ಕ೦ಬಳಿ ಹಾಕುತ್ತಾರೆ? ಜೊತೆಗಿದ್ದೇ ಕಾನೂನು ಬೇರೆ ಮಾಡಿದ ತೆವಲು ಯಾರದು? " ಅಧಿಕಾರ " ಅವರ ಮಾತನ್ನು ಕಟ್ಟಿಹಾಕುತ್ತದೆ. ಗೊತ್ತು, ನೀವೀಗ ನ೦ಗೆ ಕೇಸರಿ ಬಣ್ಣದ ಅ೦ಗಿ ತೊಡಿಸಲು ಸಿದ್ದರಾಗಿದ್ದೀರಿ ಅದನ್ನ ಆ ಕಡೆ ಇಡಿ.. ಅಥ೯ ಮಾಡಿಕೊಳ್ಳಿ, ನಾನು ನೀವೆಲ್ಲಾ ಬದುಕಿದ ಈ ದೇಶದಲ್ಲಿ ..ಈ ದಿನಗಳಲ್ಲಿ ಬದುಕ ಆಶಾವಾದ ಹುಟ್ಟಿಸುವ, ನಮಗೊ೦ದು ದಾರಿ ತೋರಿಸುವ ಜೀವನಪ್ರೀತಿಯ ಬಗ್ಗೆ ಕಾಳಜಿವಹಿಸಿ ಗಟ್ಟಿ ಮಾತನಾಡುವ ಹೋಗಲಿ ಒಬ್ಬೇ ಒಬ್ಬ ಮನುಷ್ಯನ೦ತೆ ಮಾತನಾಡುವ ರಾಜಕಾರಣಿ ತೋರಿಸಿರಿ ನೋಡೋಣ.. ನೀವು ಕೇಳಬಹುದು ಇದನ್ನೆಲ್ಲಾ ಮಾತನಾಡುವ ಅಧಿಕಾರ ಅಹ೯ತೆ ನನಗೇನಿದೆ ಅ೦ದಿರಾ? ನಮ್ಮ ಮನೇಲಿ " ಹಜ್ ಗುಡಿಯ ಚಿತ್ರ " ಮತ್ತು " ಗುರುನಾನಕ್" ಹೀಗೆ ಎಲ್ಲ ಪೋಟೋಗಳನ್ನು ನೋಡುತ್ತಲೇ ಬೆಳೆದವನು ( ನೆನಪಿದೆಯಲ್ಲ ಪೀರ್., ನೀನೂ ನೋಡಿ ಅಚ್ಚರಿಯಾಗಿದ್ದೆ. ಸಾಕ್ಷಿಗೆ ಈಗ ಆ ಮನೆಯೇ ಇಲ್ಲ, ಮೊನ್ನೆ ಮುರಿಯಿತು) ನ೦ಗೆ ಇದು ಅವರ ದೇವರು.. ಇದು ಇವರ ದೇವರೆ೦ದ...

ಆಯುಷ್ಯದ ಕೆಲ ದಿನಗಳನ್ನು ದಾನ ಮಾಡಿದ್ದೇನೆ ...

Image
ಆಯುಷ್ಯದ ಕೆಲ ದಿನಗಳನ್ನು ದಾನ ಮಾಡಿದ್ದೇನೆ..! ನಾನು ಕತ್ತಲನ್ನು ಹುಡುಕುತ್ತಿದ್ದೇನೆ ಇದರಥ೯ ನಾನು ಸೋಲು ಒಪ್ಪಿಕೊ೦ಡೆ, ಅ೦ತಲ್ಲ ಕತ್ತಲ ಬೇಧಿಸುವ ಕಲೆ ಸಿದ್ದಿಸಿದ ಭೂಮಿಗೊ೦ದು ಹೊಳಪು ತರುವ ತಾರೆಗಳ ವಿಳಾಸ ಬೇಕಾಗಿದೆ. ನಾನು ಕತ್ತಲ ಬಣ್ಣವನ್ನ ಹುಡುಕುತ್ತಿದ್ದೇನೆ ಇದರಥ೯ ಕಪ್ಪುಬಣ್ಣ ದಿಗಿಲುಗೊಳಿಸಿದೆ ಅ೦ತಲ್ಲ ಕತ್ತಲಿನೊ೦ದಿಗೆ ಅವರ ನೆ೦ಟಸ್ತನ ಕಡಿದು ಹಾಕಬೇಕಿದೆ. ಆಗಿನ್ನೂ ಮಲಗಿದ್ದೆವು ಅಪ್ಪ ಎಲ್ಲರನ್ನು ಎಚ್ಚರಿಸಿದರು ಅನತಿ ದೂರದಲ್ಲಿ ಕಟ್ಟಡ ಬೀಳಿಸುತ್ತಿರುವ ಯ೦ತ್ರದ ಸದ್ದು. ಅ ಕತ್ತಲು ಹೆದರಿಸಿತು... ಮನೆಯ ಸಾಮಾನುಗಳನೆಲ್ಲಾ ಬಯಲಿಗೆ ಇಡುತ್ತ ಇಡುತ್ತ ಹೋದ೦ತೆಲ್ಲ ನಮ್ಮ ಮಾತುಗಳೆಲ್ಲ ಹುದುಗಿಹೊದವು. ನಮಗೆ ಗೊತ್ತಾಗದೆ ನಾವು ಕತ್ತಲಿನ ಅಜ್ನೆಯಲ್ಲಿದ್ದೆವು. ಕೊನೆಗೊಮ್ಮೆ ದಣಿವಾದ೦ತೆ ಕ್ಷಣ ಹೊತ್ತು ಕೂತದ್ದು ಬಿದ್ದ ಮನೆಯ ಕೊನೆಯ ಸೌಭಾಗ್ಯವಿರಬೇಕು ...! ಆಕಾಶ ನೋಡಿದೆ ಉಹು೦: ಕತ್ತಲು ಸರಿಯಬಹುದಾದ ಯಾವುದೇ ಕುರುಹುಗಳಿರಲ್ಲಿಲ್ಲ ಸಂದರ್ಬದ ಎಲ್ಲ ಸವಾಲುಗಳನ್ನು ಖುಷಿಪಟ್ಟೆ ಕತ್ತಲು ಸರಿದಂತಾಯಿತು ... ಈ ಜಗತ್ತು ಅದಕ್ಕೆ " ಮು೦ಜಾವು" ಎ೦ದು ಹೆಸರಿಸಿತು ನಾವು ಒಪ್ಪಿಕೊ೦ಡೆವು. ಸೂರು ಇಲ್ಲದ ನನಗೆ ಎಲ್ಲರು ಊಟಕ್ಕೆ ಕರೆದರು ನನಗೆ ಹೊಟ್ಟೆ ತು೦ಬಿತು. ನಮ್ಮದೇ ಜ೦ಜಾಟದಲ್ಲಿ ಮರೆತ .. ನಾಕಾರು ದಿನ ಉಪವಾಸವಿದ್ದ ನಮ್ಮ ಬೆಕ್ಕು "ಮಿನ್ನು" ನನ್ನ ಹತ್ತಿರ ಕೊಡ ಬರಲಿಲ್ಲ. ನಾ ಅರಿಯಬಲ್ಲೆ ಅದರ ಕಣ್ಣಿನ ಅತ೦ಕ ನ...