Posts

Showing posts from November, 2008

ಆಯುಷ್ಯದ ಕೆಲ ದಿನಗಳನ್ನು ದಾನ ಮಾಡಿದ್ದೇನೆ ...

Image
ಆಯುಷ್ಯದ ಕೆಲ ದಿನಗಳನ್ನು ದಾನ ಮಾಡಿದ್ದೇನೆ..! ನಾನು ಕತ್ತಲನ್ನು ಹುಡುಕುತ್ತಿದ್ದೇನೆ ಇದರಥ೯ ನಾನು ಸೋಲು ಒಪ್ಪಿಕೊ೦ಡೆ, ಅ೦ತಲ್ಲ ಕತ್ತಲ ಬೇಧಿಸುವ ಕಲೆ ಸಿದ್ದಿಸಿದ ಭೂಮಿಗೊ೦ದು ಹೊಳಪು ತರುವ ತಾರೆಗಳ ವಿಳಾಸ ಬೇಕಾಗಿದೆ. ನಾನು ಕತ್ತಲ ಬಣ್ಣವನ್ನ ಹುಡುಕುತ್ತಿದ್ದೇನೆ ಇದರಥ೯ ಕಪ್ಪುಬಣ್ಣ ದಿಗಿಲುಗೊಳಿಸಿದೆ ಅ೦ತಲ್ಲ ಕತ್ತಲಿನೊ೦ದಿಗೆ ಅವರ ನೆ೦ಟಸ್ತನ ಕಡಿದು ಹಾಕಬೇಕಿದೆ. ಆಗಿನ್ನೂ ಮಲಗಿದ್ದೆವು ಅಪ್ಪ ಎಲ್ಲರನ್ನು ಎಚ್ಚರಿಸಿದರು ಅನತಿ ದೂರದಲ್ಲಿ ಕಟ್ಟಡ ಬೀಳಿಸುತ್ತಿರುವ ಯ೦ತ್ರದ ಸದ್ದು. ಅ ಕತ್ತಲು ಹೆದರಿಸಿತು... ಮನೆಯ ಸಾಮಾನುಗಳನೆಲ್ಲಾ ಬಯಲಿಗೆ ಇಡುತ್ತ ಇಡುತ್ತ ಹೋದ೦ತೆಲ್ಲ ನಮ್ಮ ಮಾತುಗಳೆಲ್ಲ ಹುದುಗಿಹೊದವು. ನಮಗೆ ಗೊತ್ತಾಗದೆ ನಾವು ಕತ್ತಲಿನ ಅಜ್ನೆಯಲ್ಲಿದ್ದೆವು. ಕೊನೆಗೊಮ್ಮೆ ದಣಿವಾದ೦ತೆ ಕ್ಷಣ ಹೊತ್ತು ಕೂತದ್ದು ಬಿದ್ದ ಮನೆಯ ಕೊನೆಯ ಸೌಭಾಗ್ಯವಿರಬೇಕು ...! ಆಕಾಶ ನೋಡಿದೆ ಉಹು೦: ಕತ್ತಲು ಸರಿಯಬಹುದಾದ ಯಾವುದೇ ಕುರುಹುಗಳಿರಲ್ಲಿಲ್ಲ ಸಂದರ್ಬದ ಎಲ್ಲ ಸವಾಲುಗಳನ್ನು ಖುಷಿಪಟ್ಟೆ ಕತ್ತಲು ಸರಿದಂತಾಯಿತು ... ಈ ಜಗತ್ತು ಅದಕ್ಕೆ " ಮು೦ಜಾವು" ಎ೦ದು ಹೆಸರಿಸಿತು ನಾವು ಒಪ್ಪಿಕೊ೦ಡೆವು. ಸೂರು ಇಲ್ಲದ ನನಗೆ ಎಲ್ಲರು ಊಟಕ್ಕೆ ಕರೆದರು ನನಗೆ ಹೊಟ್ಟೆ ತು೦ಬಿತು. ನಮ್ಮದೇ ಜ೦ಜಾಟದಲ್ಲಿ ಮರೆತ .. ನಾಕಾರು ದಿನ ಉಪವಾಸವಿದ್ದ ನಮ್ಮ ಬೆಕ್ಕು "ಮಿನ್ನು" ನನ್ನ ಹತ್ತಿರ ಕೊಡ ಬರಲಿಲ್ಲ. ನಾ ಅರಿಯಬಲ್ಲೆ ಅದರ ಕಣ್ಣಿನ ಅತ೦ಕ ನ