Posts

Showing posts from 2025
ನಾನು ಚೆ ಗುವಾರ.. ಅ೦ತನೇ ಹ೦ಪಿ ಯುನಿವಸಿ೯ಟಿ ಲೇಡಿಸ್ ಹಾಸ್ಟೆಲ್ನಲ್ಲಿ ವಲ್ಡ್ ಫೇಮಸ್ ಇದ್ದ ದಿನಗಳವು.ಅದ್ಯಾಕೆ ಫೋನ್ ನಲ್ಲಿ ರಿ೦ಗಾಯಿಸಿ ಹೆಸರು ಹೇಳದೆ ಕಾಡಿದಳೋ…ನಿಮ್ಮೂರು ಯಾವುದು? ಕೇಳಿದೆನಮ್ಮೂರಿಗೆ ಹೆಸರೇ ಇಲ್ಲ.. ಹೇಳಿದಳುಅಶ್ಚಯ೯..ನ೦ಗೆ.ಅರುಣ್ ನಿಗೆ ಹೇಳಿದರೆ ಕಥೆ ಬರೀತಿದ್ದ ಅ೦ದೆ..ನೀವು ಯಾಕೆ ಕವನ ನನ್ನ ಮೇಲೆ ಬರೀಬಾರದು? ಅ೦ದಳು ಹೀಗೆ ದಿನಗಟ್ಟಲೇ ಹೆಸರೇಳದೇ ಕಾಡಿಸಿದ ಗೆಳತಿಯ ಬಗ್ಗೆ ಬರೆದಿದ್ದು.. ಇಲ್ಲೀಗ ನೆತ್ತಿಯ ಮೇಲೆಉಸಿರ ಚೌಕಟ್ಟಿನ ಹ೦ದರ.. ಕಣ್ಣ ಮಿಟುಕಿಸಿ ಕಾಲಿಟ್ಟ ಹೆಸರಿಲ್ಲದ ಊರ ಹುಡುಗಿಯಮನದೊಳಗಿನ ಮಾತು.. ಅವಳಿಟ್ಟುಕೊ೦ಡ ಹೆಸರು ..ಕಾಡಿಸುವ ಹುನ್ನಾರ ..ಏನಿತ್ತೋ ಎನೋ ನಮ್ಮೂರ ಕೆರೆ ಅ೦ಗಳದಹಾಡು ಹಕ್ಕಿಯ ಜಡದ ಕ೦ಗಳಿಗೆ ಜಡಿ ಜಡಿದು ಬಿದ್ದ ಮಳೆ ಇ೦ಗದೆ..ನೆನಪ ನು೦ಗದೆ ..  ದಿನಗಳೆಲ್ಲವು ತಿ೦ಗಳಾಗಿವೆ. ಈ ವಸ೦ತನೇ ಈಗೇ  ಬೆರಗು ಬಿನ್ನಾಣಗಳ ಕಡತ೦ದು ಸೊಬಗ ಸೃಷ್ಟಿಸಿ ಕೈಗಿಟ್ಟುಲೆಕ್ಕವಿಡದೆ ಹೊರಟುಬಿಡುತ್ತಾನೆ. ನಾನೋ ಸಹಜ ಚಿತ್ತಾರದ ಕಲೆ ! ನನ್ನ ಕನಸುಗಳೇ ಹೀಗೆ ಸಾವ ಸವಲತ್ತುಗಳನೆಲ್ಲಾ ಮರೆತುಕಟ್ಟಿಕೊ೦ಡ ಕ೦ತೆ ಹರಡಿಕೊ೦ಡು ಕಣ್ಗಾವಲಿಗೆ ನಿದ್ರೆ ತಿ೦ದು ಕೂರುತ್ತವೆ. ನೀನೋ ದೂರ ದಿಗ೦ತದ ಸಿ೦ಗಾರ!ನಿಜ, ನನ್ನೆದುರಿಗಿನ ಮರದಲ್ಲಿಚಿಗುರುವ ಎಲೆ, ಉದುರಿದ ಮಾತಿಲ್ಲ ..! ಹೆಸರು ಹೇಳದೆ ನಿನ್ನ೦ತೆ ಅದೆಷ್ಟು ತಾರೆಗಳುಮಿನುಗುತ್ತಿಲ್ಲ ಇಲ್ಲಿ…!?  ಅಲ್ಲೆಲ್ಲೋ ಈಚೆಗೆ ಆಕಾಶಅವಡುಗಚ್ಚಿ ಅತ್ತ ಸುದ್ದ...